Friday, July 8, 2011

ಯಾಂತ್ರಿಕ ಬದುಕು


ಮನುಷ್ಯನೊಬ್ಬ ಯಾಂತ್ರಿಕನಾಗಿದ್ದಾನೆ...
ತಾನೊಬ್ಬ ಜೀವಿ ಎಂಬುದ ಮರೆತಿದ್ದಾನೆ..!
ಅವನದ್ದು ಬರಿಯ ಯಾಂತ್ರಿಕ ಬದುಕು
ಈ ಪದ್ಯವು ಅವನ ದಿನಚರಿಯ ಒಂದು ತುಣುಕು...

ಬೆಳಿಗ್ಗೆ ಬೇಗ ಏಳು
ತನ್ನ ಕಾರ್ಯಗಳನ್ನೆಲ್ಲ ಮುಗಿಸು,
ಕೆಲಸಕ್ಕೆ ತಯಾರಿ ನಡೆಸು
ಆ ಕೆಲಸದಲ್ಲಿ ಮನೆ-ಮತವನ್ನು ಮರೆತು!

ಪ್ರೀತಿ-ಪ್ರೇಮ ಬತ್ತಿದೆ..
ಮನುಷ್ಯತ್ವ ಸತ್ತಿದೆ!!
ಮನೆಯವರ ಜತೆಗೆ ಕಾಲಹರಣ
ಈಗ ಬರಿಯ ಗಾಳಿಮಾತಾಗಿದೆ!..

ಮನಶ್ಯಾಂತಿ ದೊರಕದು,
ಮನಸೋ ಇಚ್ಛೆ ನಡೆಯಲಾಗದು..
ಈ ದಿನಚರಿ ಅವನನ್ನು ಕಟ್ಟಿ ಹಾಕಿದೆ
ನರಳುತಿದ್ದಾನೆ ಅವನು ಇದರಿಂದ ಹೊರ ಬರಲಾಗದೆ

ಮನಸ್ಸು ಆರೋಗ್ಯವಾಗಿಲ್ಲ,
ದೇಹದಲ್ಲಿ ಶಕ್ತಿಲ್ಲ
ಆದರೂ ಮನೆಗೆ ದುಡಿಯಬೇಕಲ್ಲಾ...?!?!!!
ಎಂಬ ಚಿಂತೆ ತಪ್ಪಿದಲ್ಲ

ಕೆಲಸ ಕೆಲಸ ಕೆಲಸಾ..
ಇದರಲ್ಲೇ ಮರೆತ್ತಿದ್ದಾನೆ ಒಲವ
ಮಕ್ಕಳ ಜೊತೆ ಕಾಲ ಕಳೆಯದು..
ಅದು ಒಂದು ಜೀವನವ??!!

ಏನಿದು!!??
ಎಲ್ಲಿ ಹೊರಟಿದೆ ಜೀವನವೆಂಬ ಪಯಣವು??
ದಿಕ್ಕಿಲ್ಲ,ಗುರಿ ಇಲ್ಲ!!
ಕಪ್ಪು ಬಿಳುಪಾಯಿತು ಇಡೀ ಬದುಕೆಲ್ಲ!

ಪುಸ್ತಕದಲ್ಲಿ ಕಂಡೆ ಪ್ರೀತಿ,
ಚಲನಚಿತ್ರದಲ್ಲಿ ನೋಡಿದೆ ಪ್ರೀತಿ..
ನಮ್ಮ ಜೀವೆನದಲ್ಲಿಲ್ಲವೆಂಬ ಭ್ರಾಂತಿ
ನಡೆಯಲೇಬೇಕು ಇದಕ್ಕೊಂದು ಕ್ರಾಂತಿ..

ಸಾಕಪ್ಪಾ ಸಾಕು!!
ಈ ಯಾಂತ್ರಿಕ ಬದುಕು..
ಮಾತನಾಡಿದೆ ದುಡ್ಡೇ ಎಲ್ಲದಕ್ಕೂ..
ಅಂತ್ಯ ಹಾಡೋಣ ನಾವೆಲ್ಲರೂ ಇದಕ್ಕೆ

ಕಳಚಿಹಾಕೋಣ ಈ ಮುಖವಾಡವನ್ನ..
ಮರುಜೀವ ಕೊಡೋಣ ಮನುಷ್ಯತ್ವಕ್ಕಿನ್ನು
ಪ್ರೀತಿ ಹುಟ್ಟಲಿ ಎಲ್ಲರ ಮನದಲ್ಲಿ
ಗೌರವ ಬೆಳೆಯಲಿ ಒಬ್ಬರಿಗೊಬ್ಬರಲ್ಲಿ..

ಇದೆ ನನ್ನ ಆಶಯ
ಮರೆಯೋಣ ಎಲ್ಲರು ಯಾಂತ್ರಿಕತೆ ಎಂಬ ಪದವ...

ವರುಣ್ ವಿವೇಕ್ ಜೆ