Sunday, June 20, 2010

ರೀತಿ ನೀತಿ

ಬದುಕಿದ್ದರೇನು ಫಲ...?
ಇದ್ದೂ ಉಪಯೋಗವಿಲ್ಲ,
ಸಮಾಜಕ್ಕೆ, ಪೋಷಕರಿಗೆ ಏನೂ
ಉಪಯೋಗವಿಲ್ಲದವನಿದ್ದೇನು ಫಲ??


ಅವನಿದ್ದೂ ಸತ್ತಂತೆ.
ಜೀವಂತ ಶವ!!!
ಏನೂ ಸಾಧಿಸದವ,
ಕಲ್ಪನೆಗೂ ಮೀರಿದ ಕೀಳು ಮನುಷ್ಯನಂತೆ..!


ಭೂಮಿಗೆ ಭಾರ,
ಸುಮ್ಮನೆ ದವಸ ಧಾನ್ಯಗಳ ಹರಣ
ಹನವಿಲ್ಲದ ಕುದುರೆಯಂತೆ
ಗುರಿ ಇರದ ಜೀವನ ಅವನದ್ದು.


ಜೀವನವೆಂಬ ರಣರಂಗದಲ್ಲಿ
ಕೈಲಾಗದವನಂತೆ ಕುಳಿತು
ಅತ್ತ ಯುಧಕ್ಕಿಲ್ಲ,ಇತ್ತ ಏನಕ್ಕೂ
ಪ್ರಯೋಜನವಿಲ್ಲದವನದ್ದು ಕೀಳು ಜನುಮ!!


ಊಟ ತಿಂದ ಮನೆಯ
ಕಾಯುವುದು ನೀಯತ್ತು ಪ್ರಾಣಿಯ ಗುಣ
ಹುಟ್ಟಿ, ಬೆಳೆದು ಬಂದ ಮನೆಗೆ
ಏನೂ ಕೊಡದೆ ಬದುಕ್ಕಿದ್ದರೇನು ಫಲ??


ಎಂಥ ಜೀವನ?????
ಯಾವುದರಲ್ಲೂ ಮುಂದಿಲ್ಲ...
ಯಾವ ಕೆಲಾವೂ ಬರುವುದಿಲ್ಲ
ಹೀಗಿದ್ದರೆ ಅವನೆಲ್ಲು ಸಲ್ಲವನಲ್ಲ...


ಬದುಕುವುದ ಕಲಿಯೂ
ಮಂಕು ದಿಣ್ಣೆ
ಬರಿಯ ಮೈ ಬೆಲಿಸಿದರೆ ಸಾಲದು
ಜೊತೆಗೆ ಬುದ್ಧಿಯೂ ಎಲಿಸಬೇಕು


ಜಗತ್ತಿನಲ್ಲಿ ತಾನೂ ಒಬ್ಬನಾಗಿ ಬಾಳಬೇಕು
ಎಲ್ಲರಿಗೂ ಮಾದರಿಯಾಗಬೇಕು
ಎಲ್ಲರಿಗೂ ಉಪಯುಕ್ತವಾಗಬೇಕು
ಹಾಗಿದ್ದರೆಯೇ ಜೀವನ...!

Friday, June 18, 2010

3 ದಿನದ ಮಾಯಾಜಾಲ

ಎಂಥದಿದು??

ಎಂದೂ, ಯಾರೂ ಕಂಡಿರದ

ಮಾಯಾಜಾಲವಿದು.....!!!

ಈ ಜೀವನ ಎಂಬುದು.

ಏನೂ ಹೊತ್ತಿ ಬರುವುದಿಲ್ಲ,

ಈ ಭೂಮಿಯ ಮೇಲೆ.

ಏನೂ ಹೊತ್ತಿ ಹೋಗುವುದಿಲ್ಲ

ಆಯಸ್ಸು ಮುಗಿದ ಮೇಲೆ.

ಬೇಡುವುದ ಬಿಡುವುದಿಲ್ಲ,

ಸಿಗುವವರೆಗೂ ನೆಮ್ಮದಿ ಇಲ್ಲ.!

ಕಾಡಿ ಬೇಡಿ ಪಡೆದರೂ,ಜೊತೆ

ಬಾಳುವುದು ಕಿಂಚಿತ್ತಷ್ಟೇ!

ಎಷ್ಟೇ ಎಚ್ಚರವಿದ್ದರು,

ಏನೇ ಕಷ್ಟಪಟ್ಟರೂ

ಸಂಭಾಲಿಸಲಾಗುವುದಿಲ್ಲ ಅದ್ದನ್ನ

ದೊರೆತ ಆ ಮುತ್ತನ್ನ.

ಮಣ್ಣಿನ ದೇಹವಿದು,

ಅಶಾಶ್ವತ ಅದು.

ನಾವೀ ಭೂಮಿಯ ಮೇಲಿರುವುದು

ಕೇವಲ ಮೂರೇ ದಿನವದು.

ಮಾಡುವುದು ಬೇಕಾದಷ್ಟಿದೆ,

ಜೀವನ ಅಷ್ಟೇ ಚಿಕ್ಕದಿದೆ.

ಏನಿದೆ ಇಲ್ಲಿನ ಆತಿಥ್ಯ.......

ನೀನು ಗಳಿಸುವೆ, ಅದೇ ಸತ್ಯ..

ನಿನಗೊಸ್ಕರವಲ್ಲಡಿದರು,

ನಿನ್ನ ಪ್ರೀತಿ ಪಾತ್ರರಿಗಾದರೂ,

ಅವರ ಸಂತೋಷಕ್ಕದರೂ,

ನೀನು ಜೀವಿಸಿರು.......

ಎಲ್ಲರಿಗು ಸಂತೋಷವ

ನೀ ಕೊಡು

ನಿನ್ನೀ ಭೂಮಿಯ ಯಾತ್ರವ

ಹಸನವನ್ನಾಗಿ ಮಾಡು.

ಪರರಿಗೆ ಉಪಯುಕ್ತವಾಗಿರು,

ನಗುಮುಖ ಎಲ್ಲರಲ್ಲೂ ಬೀರಿಸು,

ನಿನ್ನ ನೆನಪನ್ನು ಸದಾ ಉಳಿಸು,

ಆಗಲೇ ಸಾರ್ಥಕ ನಿನ್ನೆ ಬದುಕು..!!

Tuesday, June 15, 2010

ಎಲ್ಲಿರುವೆ ನೀನು??

ಯಾರೇ ನೀನು?
ನಿನ್ನ ಮೊಡಿಯೇನು?
ನನ್ನ ಬಾಳಿನ ಭಾನು,
ಎಂದು ಕಾಣಿಸುವೆ ನೀನು??


ಕಾಣದೆ ಕಾಡುವೆ ಏತಕೆ?
ಮುಂದೆ ಬರಲು ಅಂಜುವೆ ಏತಕೆ?
ಮಾತನಾಡಿಸಲು ಭಯವೇ??
ಏಕೆ ಹೀಗೆ ಕಾಡುವೆ?


ಎಲ್ಲಿರುವೆ ನೀನು?
ಅರಸುತ್ತ ಬರಲೇನು?
ನೀನು ಹೀಗೆ ಮಾಡಿದರೆ ಹೇಗೆ?
ಎಂದು ಕಾಣುವೆ ಎನಗೆ??


ಬೇಗನೆ ಎದುರಿಗೆ ಬಾ......
ನನ್ನ ಜೀವನದಲ್ಲಿ ಸಂತಸವ ತಾ..
ಕಾಯುವೆ ನಿನಗೆ ಸದಾ..
ನನ್ನ ಅಪ್ಪಿಕೋ ಬೇಗನೆ ಬಾ.

ನೀನೆ

ಬಾನಲ್ಲು ನೀನೆ,
ಬಾವಿಯಲ್ಲೂ ನೀನೆ....!
ಕಣ್ಣಲ್ಲೂ ನೀನೆ,
ಮಣಲ್ಲು ನೀನೆ.
ರೊಟ್ತಿಯಲ್ಲೂ ನೀನೆ,
ಕಸದ ತೊಟ್ಟಿಯಲ್ಲೂ ನೀನೆ.
ತೆಂಗಿನ ಗರಿಯಲ್ಲೂ ನೀನೆ,
ನಾಯಿಯ ಮರಿಯಲ್ಲೂ ನೀನೆ.
ನನ್ನ ಗುಬ್ಬಚ್ಚಿಯು ನೀನೆ,
ನನ್ನ ಅಜ್ಜಿಯು ನೀನೆ.
ಎಲ್ಲೆಲ್ಲು ನೀನೆ,
ನನ್ನ ಮನದಲ್ಲೂ ನೀನೆ.
ಎಲ್ಲೆಲ್ಲು ನೀನೆ ನನ್ನ ಬಾಳೆಲ್ಲ ನೀನೆ!!!
ನೀನೆ ನೀನೆ ನನ್ನಲ್ಲೂ ನೀನೆ
ಎಲ್ಲೆಲ್ಲು ನೀನೆ.....!!!